ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೂ ಒಂದು ದಿನಗಳಲ್ಲಿ ಆಚರಿಸಬಹುದಾಗಿದೆ.
No. D2/9611/2014 Office of the Deputy Director, Education Kasaragod, Dated: 19.08.2014
As decided in District Level Committee of Linguistic Minorities, the Headmasters of all Kannada Medium Schools are requested to celebrate ‘Dasara Nadahabba’ the festival of knowledge in Kannada Medium Schools one day during Navarathri festival .
Yours faithfully,
Sd/-
DEPUTY DIRECTOR, EDUCATION,
KASARAGOD
ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ
ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಆಚರಿಸಬೇಕಾದ ದಸರಾ ನಾಡಹಬ್ಬದ ಕುರಿತು ಕಿರುನೋಟ.
ರೂಪು ರೇಷೆ ತಯಾರಿ- ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮತ್ತುಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು.
ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ.
ಮುನ್ನುಡಿ
ಕಾಸರಗೋಡಿನಲ್ಲಿ ಲಕ್ಷಾಂತರ ಕನ್ನಡಿಗರು ಕನ್ನಡ ಸಂಸ್ಕೃತಿಯ ವಾಹಕರಾಗಿ ಇಂದಿಗೂ ನೆಲೆನಿಂತಿರುವುದು ನಿಜಕ್ಕೂ ಕೇರಳ,ಕರ್ನಾಟಕ ಜನತೆಯ ಮತ್ತು ಸರಕಾರದ ಕ್ರಿಯಾತ್ಮಕ ಸಹಕಾರದಿಂದಾಗಿದೆ.ಕಲೆ,ಸಂಸ್ಕೃತಿ ನಿಂತ ನೀರಲ್ಲ.ಕಾಲಾನುಕಾಲಕ್ಕೆ ಬದಲಾವಣೆಗೊಳ್ಳುತ್ತದೆ.ದೃಶ್ಯ ಮಾಧ್ಯಮಗಳು,ಪತ್ರಿಕೆಗಳು ವಾಣಿಜ್ಯೋದ್ಧೇಶಗಲಿಂದ ಪ್ರೇರಿತವಾಗಿ ಕೆಲವೊಮ್ಮೆ ಜನರ ಸಾಂಪ್ರದಾಯಿಕ ಕಲೋಪಾಸನೆಗೆ ಸ್ಪಂದಿಸದೇ ಹೋಗಬಹುದು.ಆದರೆ ಸಾಂಪ್ರದಾಯಿಕ ಸಾಹಿತ್ಯ, ಕಲೆ,ಶಾಸ್ತ್ರೀಯ ಕಲೆಗಳು ಜನಸಾಮಾನ್ಯರ ಮನೆಮಾತಾಗಬೇಕಾದ ಅನಿವಾರ್ಯತೆಯಿದೆ.ಕೇಂದ್ರಸರಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಆದರೆ ಯಾವುದೇ ಭಾಷೆ ಉನ್ನತ ಸ್ಥಾನಕ್ಕೇರಬೇಕಾದರೆ ಅದು ಜನಸಾಮಾನ್ಯರ ಸೊತ್ತಾಗಬೇಕು.ಸಾಂಪ್ರದಾಯಿಕ ಕಲೆ ಸಾಹಿತ್ಯ ಜನಪದ ಸಂಪತ್ತು ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ಹತ್ತಿರವಾಗಬೇಕು.ಈ ನಿಟ್ಟಿನಲ್ಲಿ ರಾಜ್ಯಗಳು ಆಚರಿಸುವ ನಾಡಹಬ್ಬಗಳು ಮಹತ್ತರ ಕಾರ್ಯವೆಸಗುತ್ತಿವೆ. ದಸರಾ ನಾಡಹಬ್ಬವೂ ಇದಕ್ಕೆ ಹೊರತಾಗಿಲ್ಲ.ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಯ ಆಧಾರದಲ್ಲಿ ನಾವು ಇಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಇದು ಅನಿವಾರ್ಯವಾಗಿದೆ.
ಈ ವರ್ಷ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೊಂದು ದಿನ ಆಚರಿಸಬೇಕೆಂಬ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಸುತ್ತೋಲೆಗೆ ನಾವು ಸಕಾರಾತ್ಮಕ ಪ್ರತಿಕ್ರಿಯೆ ನೀಡಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಕನ್ನಡಾಭಿಮಾನಿ ಕೇರಳಿಗರಿಗೆ ಕನ್ನಡ ಸಂಸ್ಕೃತಿಯ ಸಾರವನ್ನು ಪರಿಚಯಿಸಲು ಕೆಲವು ಕಾರ್ಯಕ್ರಮಗಳನ್ನು ಮುಂದಿಡುತ್ತಿದ್ದೇವೆ.
ಉದ್ದೇಗಳು - *ಮಕ್ಕಳಿಗೆ ಕನ್ನಡ ಸಾಹಿತ್ಯ,ಸಂಸ್ಕೃತಿಯ ಹಿರಿಮೆಯನ್ನು ತಿಳಿಸುವುದು.
*ಮಕ್ಕಳಿಗೆ ಸಾಹಿತ್ತಿಕ ರಚನೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವುದು.
*ಜನಪದ ಕಲೆಗಳ ಕುರಿತು ಜಾಗೃತಿ ಮೂಡಿಸುವುದು.
*ಕನ್ನಡ ಸಾರಸ್ವತ ಲೋಕದೆಡೆಗೆ ಜನರ ಚಿತ್ತ ಸೆಳೆಯುವಂತೆ ಮಾಡುವುದು.
*ಸ್ಥಳೀಯ ಜನಪದ ಕಲಾವಿದರನ್ನು ಗೌರವಿಸುವುದು.
*ಸ್ಥಳೀಯ ಸಾಂಸ್ಕೃತಿಕ ರಾಯಭಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
*ಮಕ್ಕಳನ್ನು ಓದುವ ಕಡೆಗೆ ಆಕರ್ಷಿಸುವಂತೆ ಮಾಡುವುದು.
*ಮಕ್ಕಳ ಸೃಜನಶೀಲ ಬರವಣಿಗೆಯನ್ನು ಪ್ರೋತ್ಸಾಹಿಸುವುದು.
*ಮಕ್ಕಳಿಗೆ ಕಲೆ, ಸಂಸ್ಕೃತಿಗಳಲ್ಲಿ ಒಲವು ಮೂಡುವಂತೆ ಪ್ರೇರೇಪಿಸುವುದು.
|
ಶಾಲೆಯಲ್ಲಿ ನಡೆಸಬಹುದಾದ ಸ್ಪರ್ಧೆಗಳು/ಚಟುವಟಿಕೆಗಳು.
|
ಕಿರಿಯ ಪ್ರಾಥಮಿಕ ವಿಭಾಗ – ಸಂಗೀತ ಕುರ್ಚಿ, ಮಿಠಾಯಿ ಹೆಕ್ಕುವುದು, ಪುಗ್ಗೆ ಒಡೆಯುವುದು, ಅಭಿನಯ ಗೀತೆ, ಕಥೆ ಹೇಳುವುದು,ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಹಿರಿಯ ಪ್ರಾಥಮಿಕ ವಿಭಾಗ –ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ,ಮಡಕೆ ಒಡೆಯುವುದು,ಹುಲಿನಾಟ್ಯ, ಚಿತ್ರ ನೋಡಿ ಕಥೆ ಬರೆಯುವುದು,ಚಿತ್ರ ನೋಡಿ ಕವಿತೆ ಬರೆಯುವುದು,ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಪ್ರೌಢ ಶಾಲಾ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ, ಸುಂದರಿಗೆ ಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ತತ್ವಪದ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
ಹೈಯರಿ ಸೆಕಂಡರಿ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಮಡಕೆಒಡೆಯುವುದು, ಸುಂದರಿಗೆಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ಮಂಕುತಿಮ್ಮನ ಕಗ್ಗದ ವಾಚನ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
|
ಸಂಗೀತ ಕುರ್ಚಿ - ಮಕ್ಕಳ ಸಂಖ್ಯೆಗಿಂತ ಐದಾರು ಕುರ್ಚಿಗಳು ಕಡಿಮೆ ಇರಬೇಕು. ಅವುಗಳನ್ನು ವೃತ್ತಾಕಾರದಲ್ಲಿ ಇಡುವುದು. ಶಿಕ್ಷಕರು ಹಿತವಾದ ಸಂಗೀತವನ್ನು ಕೇಳುವಂತೆ ಮಾಡಬೇಕು. ಮಕ್ಕಳು ವೃತ್ತಾಕಾರದಲ್ಲಿ ಓಡಬೇಕು. ಸಂಗೀತ ನಿಲ್ಲಿಸಿದ ಕೂಡಲೇ ತನ್ನ ಎದುರಿಗಿರು ಕುರ್ಚಿಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕು.ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ಬಂದು ಕೂರಬಾರದು.ಕುಳಿತುಕೊಳ್ಳಲು ಕುರ್ಚಿ ಸಿಗದ ಮಕ್ಕಳು ಆಟದಿಂದ ನಿರ್ಗಮಿಸಬೇಕಾಗುತ್ತದೆ. ಮುಂದೆ ಮಕ್ಕಳ ಸಂಖ್ಯೆಗಿಂತ ಒಂದೊಂದು ಕುರ್ಚಿಯನ್ನು ಕಡಿಮೆ ಮಾಡುತ್ತಾ ಆಟವನ್ನು ಮುಂದುವರಿಸಬೇಕು; ಕೊನೆಕೊನೆಗೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತದೆ.ಕುರ್ಚಿಯೂ ಕಡಿಮೆಯಾಗುತ್ತದೆ.ಅಂತಿಮವಾಗಿ ಉಳಿದವನನು/ಳು ಸಂಗೀತ ಕುರ್ಚಿ ಆಟದಲ್ಲಿ ವಿಜಯಿ ಎ೦ದು ಪರಿಗಣಿಸಲಾಗುತ್ತದೆ.
ಮಿಠಾಯಿ ಹೆಕ್ಕುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು, ಸ್ವಲ್ಪ ಮಿಠಾಯಿಯನ್ನು ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ.ವೃತ್ತದ ಮಧ್ಯಲ್ಲಿ ನಿಂತ ಶಿಕ್ಷಕರು ಮಿಠಾಯಿಯನ್ನು ಚೆಲ್ಲಬೇಕು. ಎಲ್ಲಾ ಮಕ್ಕಳು ಅದನ್ನು ಹೆಕ್ಕಬೇಕು. ಯಾರಿಗೆ ಅತೀ ಹೆಚ್ಚು ಮಿಠಾಯಿ ಸಿಕ್ಕಿದೆಯೋ ಅವರನ್ನು ವಿಜಯಿಯೆಂದು ಗುರಿತಿಸಬೇಕು.
ಪುಗ್ಗೆ ಒಡೆಯುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು,ಪ್ರತಿಯೊಬ್ಬ ಸ್ಪರ್ಧಾರ್ಥಿಗೆ ಮೂರು ಪುಗ್ಗೆಯಂತೆ ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ. ಶಿಕ್ಷಕರು ವೃತ್ತದ ಮಧ್ಯದಲ್ಲಿ ನಿಂತು ವಿಶಿಲ್ ಊದಿ ಸದ್ದು ಮಾಡಿದ ತಕ್ಷಣ ಮಕ್ಕಳು ತಮ್ಮ ಪುಗ್ಗೆಯನ್ನು ಊದಿ ದೊಡ್ಡದಾಗಿಸಿ ಒಡೆಯಬೇಕು. ಯಾರು ಮೊದಲಿಗೆ ಮೂರು ಪುಗ್ಗೆಗಳನ್ನು ಊದಿ ಒಡೆಯುತ್ತಾರೆಯೋ ಅವನನ್ನು/ಳನ್ನು ವಿಜಯಿಯೆಂದು ಗುರುತಿಸಲಾಗುತ್ತದೆ.
ಲಿಂಬೆ ಚಮಚ ಓಟ- ಸಾಮಾನ್ಯ ಓಟ ಸ್ಪರ್ಧೆಯಲ್ಲಿ ಪ್ರಾರಂಭಿಸುವಂತೆ ಓಟಕ್ಕಾಗಿ ತಂಡಗಳನ್ನು ಮೊದಲೇ ಮಾಡಬೇಕು.ಸ್ಪರ್ಧಾರ್ಥಿಗಳು ಬಾಯಲ್ಲಿ ಚಮಚ ಅದರಲ್ಲೊಂದು ಲಿಂಬೆ ಹಣ್ಣು ಇರಿಸಬೇಕಾಗುತ್ತದೆ. ಮೊದಲಿಗೆ ತಲಪಿದವ ಜಯಶಾಲಿಯಾಗುತ್ತಾನೆ.
ಗೋಣಿಚೀಲ ಓಟ- ಗೋಣಿ ಚೀಲದ ಒಳಗೆ ಕಾಲುಗಳನ್ನು ಹಾಕಬೇಕು ಬಳಿಕ ಕುಪ್ಪಳಿಸಿಕೊಂಡು ನಿಗದಿತ ದೂರವನ್ನು ಕ್ರಮಿಸಬೇಕು.ಮೊದಲಿಗೆ ಗುರಿ ಮುಟ್ಟಿದವನು ವಿಜಯಿಯಾಗುತ್ತಾನೆ.ಇದನ್ನು ಸ್ಪರ್ಧಾರ್ಥಿಗಳ ಸಂಖ್ಯೆಗನುಸಾರವಾಗಿ ತಂಡಗಳಾಗಿ ಓಡಿಸಬೇಕಾಗುತ್ತದೆ.
ಮಡಕೆ ಒಡೆಯುವುದು- ನಿಗದಿತ ದೂರದಲ್ಲಿ ಎರಡು ಕಂಬಗಳನ್ನು ನೆಡಬೇಕು.ಅದಕ್ಕೆ ಕೋಲೊಂದನ್ನು ಭೂಸಮಾನಾಂತರವಾಗಿ ಜೋಡಿಸಬೇಕು. ಅದರ ಮಧ್ಯಕ್ಕೆ ಮಣ್ಣಿನ ಮಡಕೆಯೊಂದನ್ನು ಕಟ್ಟಬೇಕು.ಅದರೊಳಗೆ ಬಣ್ಣದ ನೀರನ್ನು ತುಂಬಿಸಿದರೆ ಇನ್ನೂ ಒಳ್ಳೆಯದು. ಮೊದಲೇ ಗುರುತಿಸಿದ ನಿರ್ಧಿಷ್ಟ ದೂರದಲ್ಲಿ ಸ್ಪರ್ಧಾರ್ಥಿಯನ್ನು ನಿಲ್ಲಿಸಬೇಕು. ಅವನ/ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಕೋಲು ನೀಡಿ ಮೂರು ಸುತ್ತು ತಿರುಗಿಸಿ ಮಡಕೆಯಿರುವ ಕಡೆಗೆ ಮುಖ ಮಾಡಿ ಬಿಡಬೇಕು. ಕೋಲನ್ನು ಉಪಯೋಗಿಸಿಕೊಂಡು ಒಂದೇ ಹೊಡೆತಕ್ಕೆ ಮಡಕೆಯನ್ನು ಒಡೆಯಬೇಕು.ಹಲವಾರು ಸಲ ಕೋಲನ್ನು ಬೀಸುವಂತಿಲ್ಲ. ಹಾಗೆ ಮಡೆಕೆ ಒಡೆಯಲು ಸಾಧ್ಯವಾದವನು ವಿಜಯೆಯೆನಿಸಿಕೊಳ್ಳುತ್ತಾನೆ.
ಸುಂದರಿಗೆ ಬೊಟ್ಟು ಹಾಕುವುದು- ಗೋಡೆಯೊಂದರ ಪಕ್ಕದಲ್ಲಿ ಕರಿಹಲಗೆಯೊಂದನ್ನು ಇರಿಸಬೇಕು. ಚಾರ್ಟಿನಲ್ಲಿ ಸುಂದರಿಯೊಬ್ಬಳ ಮುಖದ ಚಿತ್ರವನ್ನು ಮೊದಲೇ ಸಿದ್ಧಗೊಳಿಸಬೇಕು.ಸುಂದರಿಗೆ ಬೊಟ್ಟುಹಾಕುವ ಸ್ಪರ್ಧಾಳು ನಿರ್ಧಿಷ್ಠ ಜಾಗದಲ್ಲಿ ನಿಂತುಕೊಳ್ಳಬೇಕು,ಶಿಕ್ಷಕರು ಆ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಸ್ಟಿಕ್ಕರ್ ನೀಡಬೇಕು. ಯಾರು ತಮ್ಮ ಕೈಗೆ ಸಿಕ್ಕಿದ ಸ್ಟಿಕ್ಕರನ್ನು ಸುಂದರಿಯ ಹಣೆಗೆ ಇಡುವರೋ ಅವರು ಜಯಶಾಲಿಗಳಾಗುತ್ತಾರೆ.
ಹುಲಿನಾಟ್ಯ- ಐದರಿಂದ ಏಳು ಮಂದಿಯ ತಂಡಗಳು ಈ ಪ್ರದರ್ಶನ ನೀಡಬಹುದು.ಸಂಗೀತ ವ್ಯವಸ್ಥೆ ಶಾಲೆಯಿಂದಲೇ ಮಾಡುವುದು ಒಳ್ಳೆಯದು.ಬಹಳಚೆನ್ನಾಗಿ ಹತ್ತು ನಿಮಿಷಗಳ ಪ್ರದರ್ಶನ ನೀಡಿದವರನ್ನು ಗುರುತಿಸಬೇಕು.
ಸಾಹಿತ್ತಿಕ ಸ್ಪರ್ಧೆಗಳು
ಅಭಿನಯ ಗೀತೆ - ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಇದನ್ನು ಏರ್ಪಡಿಸಬಹುದು.
ಕಥೆ ಹೇಳುವುದು- ಆಂಗಿಕ ಅಭಿನಯದೊಂದಿಗೆ ಜಾನಪದ ಕಥೆಯೋ, ನೀತಿಕಥೆಯೋ ಆಗಬಹುದು.
ಜಾನಪದ ಗೀತೆ - ಜನರಿಂದ ಜನರಿಗೆ ಹರಡಿ ಜಾನಪದ ಎ೦ದೆನಿಕೊಳ್ಳುತ್ತದೆ. ಅಂತಹ ಜಾನಪದ ಗೀತೆಳನ್ನು ಆಯ್ಕೆ ಮಾಡಿಕೊಳ್ಳಬೇಕು.
ನಾಡಗೀತೆ - ಭಾಷಾಭಿಮಾನ ಉಂಟುಮಾಡುವ ಅದೆಷ್ಟೋ ಗೀತೆಗಳು ಪ್ರಚಲಿತದಲ್ಲಿವೆ ಇವು ಯಾವುದೂ ಅನ್ಯ ಭಾಷೆಗೆ ಯಾವ ವಿರೋಧವನ್ನೂ ಮಡದೆ ಶಾಂತ ಸ್ವರೂಪದಿಂದ ಭಾಷೆಯ ಅಂದಚಂದವನ್ನು ಬಣ್ಣಿಸುತ್ತವೆ ಆದುದರಿಂದ ಇಂತಹ ಗೀತೆಗಳನ್ನು ಮಕ್ಕಳು ಹಾಡುವುದರಿಂದ ಭಾಷಾಪ್ರೇಮ ಉಂಟಾಗುವುದು.
ಚಿತ್ರ ನೋಡಿ ಕಥೆ ಬರೆಯುವುದು-ಕಥೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಚಿತ್ರ ನೋಡಿ ಕವಿತೆಬರೆಯುವುದು - ಕವಿತೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಆಶು ಕವಿತೆ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಆಶುಭಾಷಣ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಕಥಾರಚನೆ - ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ತತ್ವಪದ – ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ತತ್ವ ಪದಗಳಿಗೆ ವಿಶಿಷ್ಠ ಸ್ಥಾನವಿದೆ ಇದರ ಪರಿಚಯಕ್ಕಾಗಿ ಇದರ ಅಳವಡಿಕೆ ಮಾಡಬಹುದು.
ಭಾಮಿನಿಷಟ್ಪದಿ ಕಾವ್ಯವಾಚನ – ನಡುಗನ್ನಡ ಕಾವ್ಯಗಳ ಸೊಂದಯ್ರದ ಕುರಿತು ಮಕ್ಕಳಿಗೆ ಗೊತ್ತಾಗಬೇಕಾದರೆ ಕಾವ್ಯವಾಚನದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಬೇಕಾಗಿದೆ .ಅದಕ್ಕಾಗಿ ಹೀಗೂ ಪ್ರಯತ್ನಿಸಬಹುದು.
ಮಂಕುತಿಮ್ಮನ ಕಗ್ಗದ ವಾಚನ – ಕಗ್ಗ ಆಧುನಿಕ ನೀತಿ ಚಿಂತಾಮಣಿ ಇದರ ಪರಿಚಯವಾದರೆ ಒಳ್ಳೆಯದು.
ಸಾಂಸ್ಕೃತಿಕ ವೈಭವದ ಅಂಗವಾಗಿ ಸ್ಥಳೀಯ/ಆಮಂತ್ರಿತ ಕಲಾವಿದರಿಂದ ಹರಿಕಥೆ, ಬೊಂಬೆಯಾಟ, ಜಾದೂಪ್ರದರ್ಶನ, ಜಾನಪದ ನೃತ್ಯ ಮೊದಲಾದ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಬಹುದು.ಶಾಲಾ ಮಟ್ಟದಲ್ಲಿ ವಸ್ತು ಪ್ರದರ್ಶನ, ಬೊಂಬೆಗಳ ಪ್ರದರ್ಶನ ನಡೆಸಬಹುದು. ನಮ್ಮ ಸಾಂಪ್ರಾಯಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲಪಿಸುವ ಜವಾಬ್ದಾರಿಯನ್ನು ಹೊತ್ತ ನಾವು ನಮ್ಮ ಮಕ್ಕಳೊಂದಿಗೆ ನಾಡ ಹಬ್ಬದ ಆಚರಣೆಯನ್ನು ಮಾಡೋಣ.
******************************
No comments:
Post a Comment